Surprise Me!

ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೆವಾನಿ ಅವರು ಕಾಂಗ್ರೆಸ್‌ನಲ್ಲಿ ಗೆದ್ದ ಯುವ ನಾಯಕರು | Oneindia Kannada

2017-12-18 144 Dailymotion

ಅಹಮದಾಬಾದ್, ಡಿಸೆಂಬರ್ 18: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ ಮೂವರು ಯುವ ನಾಯಕರಲ್ಲಿ ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೆವಾನಿ ಭರ್ಜರಿ ಜಯ ದಾಖಲಿಸಿದ್ದಾರೆ. ಇನ್ನೋರ್ವ ಯುವ ನಾಯಕ, ಪಾಟೀದಾರ್ ಹೋರಾಟಗಾರ ಹಾರ್ದಿಕ್ ಪಟೇಲ್ ಚುನಾವಣೆಗೆ ನಿಂತಿರಲಿಲ್ಲ.ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ರಾಧನ್ಪುರ್ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಅವರು 55,751 ಮತಗಳನ್ನು ಪಡೆದಿದ್ದು ಹತ್ತಿರದ ಪ್ರತಿ ಸ್ಪರ್ಧಿ ಬಿಜೆಪಿಯ ಲವಿಂಜಿ ಸೋಲಂಕಿಯವರನ್ನು 12,544 ಮತಗಳಿಂದ ಸೋಲಿಸಿದ್ದಾರೆ.ಕಳೆದ ನವೆಂಬರ್ ನಲ್ಲಿ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ಭರ್ಜರಿ ಗೆಲುವು ಅವರದಾಗಿದೆ.ಇನ್ನೋರ್ವ ಯುವ ನಾಯಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಕೂಡ ಭರ್ಜರಿ ಜಯ ದಾಖಲಿಸಿದ್ದಾರೆ. ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ಮೇವಾನಿ 63,471 ಮತಗಳನ್ನು ಪಡೆದಿದ್ದಾರೆ. ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿಜಯಕುಮಾರ್ ಚಕ್ರವರ್ತಿಯವರನ್ನು 21,042 ಮತಗಳ ಅಂತರದಿಂದ ಸೋಲಿಸಿದ್ದಾರೆ. <br /> <br />Gujarat Assembly Election Results 2017: Dalit rights campaigner Jignesh Mevani has won from his constituency Vadgam in Banaskantha district by 21,042 votes as an independent candidate. OBC rights campaigner Alpesh Thakor has won from his constituency Radhanpur as Congress candidate. <br />

Buy Now on CodeCanyon